ಎಮ್. ಎಸ್. ಅರ್. ಎಸ್. ಎ. ಎಸ್. ಗೆ ವಿದಾಯ ಹೇಳಿದಾಗ ಗೀಚಿದ ಭಾವನೆಗಳು. ಸಾಧಿಸಿದ ಬಗ್ಗೆ ಸಮಾಧಾನ, ಇನ್ನೂ ಸಾಧಿಸಬಹುದಾಗಿತ್ತೆಂಬ ಭಾವನೆ, ಬಿಡುವಾಗ ನಿರ್ಭಾವವಾಗಿರಬೇಕೆಂಬ ಒತ್ತಾಯದ ನಿರ್ಧಾರ ಈ ಸಾಲುಗಳಲ್ಲಿವೆ.
ವಿದಾಯ
ವಿದಾಯ
ಹಾಗೆಯೇ ಕವಲೊಡೆಯುತ್ತವೆ
ದಾರಿಗಳು ಸುಳಿವೇ ಕೊಡದಂತೆ,
ಸವೆಸಿದ ಹಾದಿಯು ನೆನೆಪಷ್ಟೇ,
ಮುಂದಿನ ಪ್ರಯಾಣಕ್ಕಾವುದಾದರೊಂದು ಪಥ.
ಇದ್ದಾಗ ಒಡನಾಡಿ,
ಎಲ್ಲರೊಂದಾಡಿ,
ಆಗೊಮ್ಮೆ, ಈಗೊಮ್ಮೆ
ಮುಸುಕಿನಲಿ ಗುದ್ದಾಡಿ,
ಒಳಗೊಳಗೇ ಅಪ್ಪಳಿಸುವ
ತೆರೆಗಳು ಹೊಯ್ದಾಡಿ,
ನನ್ನ ಕೊಂಡೊಯ್ದಿವೆ
ಮತ್ತೊಂದು ತೀರಕೆ.
ಕಲಿತ ಕಲಿಸಿದ ಹೆಮ್ಮೆಯಿದೆ,
ನಿರ್ವಂಚನೆಯ ಸಮರ್ಪಣೆಯ
ಕೆಲಸದ ಆತ್ಮ ತೃಪ್ತಿಯಿದೆ,
ತಳುಕಿಲ್ಲದ ಮನದಲಿ, ಅಳುಕಿಲ್ಲದೇ
ಹಾಕಿದ ಹೆಜ್ಜೆ ಗುರುತುಗಳಲ್ಲಿ ಹೆಮ್ಮೆಯಿದೆ.
ಒಳಿತನ್ನೇ ಬಯಸಿ,
ಒಳಿತನ್ನೇ ಉಣಿಸಿ,
ನನ್ನ ಹಾದಿ
ಹಿಡಿದೆದ್ದೇನೆ, ಸಮಸ್ತರಿಗೆ ನಮಿಸಿ.
ನಿಮ್ಮವ,
ಸೋ.ನಾ. ಶ್ರೀಧರ
I Do Remember
I do remember the path
we SASians walked together,
I remember that I learnt
and not only taught,
I remember I won running race
and not left behind in other ways,
I remember colourful days of ASCENT
and never worried about any descent,
I remember golden words, ‘Descent
should not be a Deterrent’
I do remember that today’s dusk is the precursor
for tomorrow’s beautiful dawn, a new endeavor
Do remember my wishes,
May MSRSASians grow in leaps and flourish
let me take away sweet memories to cherish
Regards,
Sridhara S.N.
No comments:
Post a Comment