Thursday, March 7, 2013

ಕಮಲಾಪುರದ ಕಮಲ

             ದಾಸ್ಯದಿಂದ ಕರ್ಮದೆಡೆಗೆ

ಎಸ್.ಎಸ್.ಎಲ್.ಸಿ. ಯವರಿಗೆ ಓದಿದ್ದೂ, ವೃದ್ಧ ತಂದೆತಾಯಿಗಳನ್ನು ಪೊರೆಯುವ ಸಲುವಾಗಿ ಅಂಬಿಕಾ ಎನ್ನುವ ಯುವತಿ ದೇವದಾಸಿಯಾಗಿ ಬದುಕನ್ನು ಮಾಡುತ್ತಿರುವುದನ್ನು ’ಪ್ರಜಾವಾಣಿ’ ತನ್ನ ವಿಶೇಷ ವರದಿಯಲ್ಲಿ ಪ್ರಕಟಿಸಿತು. ನಂತರ ಸರ್ಕಾರದಿಂದ, ಸಾರ್ವಜನಿಕರಿಂದ, ಸ್ವಾಮೀಜಿಯವರ ಒತ್ತಾಸೆಯಿಂದ, ದೇವದಾಸಿ ವೃತ್ತಿಯಿಂದ ಹೊರಬಂದು ಹೊಸಬದುಕನ್ನು ಸ್ವೀಕರಿಸಿದ ಸಂಧರ್ಭದಲ್ಲಿ ಬರೆದ ಅನಿಸಿಕೆ. 


ಕೆಸರ ಕಮಲ

ಕಮಲಾಪುರದ
ಕೆಸರೊಳಗಿನ ಕಮಲ,
ಅಂಟಿದ ಕೊಳಕ ಕಿತ್ತೊಗೆದು,
ನಿರ್ಮಲ ನಗೆಯ
ಬೀರಿದ ಅಂಬಿಕಾ,
ಬೆಳಕ ತೋರಿ
ಧರ್ಮವ ಬೆಳಗಿದ
’ಪ್ರಜಾವಾಣಿ’ ಪತ್ರಿಕಾ,
ಇಬ್ಬರಿಗೂ ಇದೋ,

ನನ್ನ ಉಧೋ, ಉಧೋ

                                                             ----- ಎಸ್. ಎನ್. ಶ್ರೀಧರ 



ದಾಸ್ಯದಿಂದ ಕರ್ಮದೆಡೆಗೆ
ಅಂಬಿಕಾ
ನಿನ್ನದೃಷ್ಟ
ಚೆನ್ನಿತ್ತು,
’ಪ್ರಜಾವಾಣಿ’ಯ
ದೆಸೆಯಿಂದ
’ದಾಸಿ’ ಬಿರುದ
ಕಿತ್ತೊಗೆದು,
’ಕರ್ಮ’ ದೆಡೆಗೆ ನಡೆದೆ
ಸೋದರೀ,
ನಿನ್ನಂತಹವರೆಷ್ಟು
ಹತಭಾಗಿನಿಯರು
ಕೂಪ ನರಕದಲಿ
ನರಳುತ್ತಿರುವರೋ,
ಅವರಿಗೆಲ್ಲರಿಗೆ ಕೈ ದೀವಿಗೆ
ತೋರುವರಾರು?


ಸೋ.ನಾ. ಶ್ರೀಧರ

No comments:

Post a Comment