ಜಿಹ್ವಾ ನಿಯಂತ್ರಣ
ದಿಗಂಬರ ಜೈನ ಮುನಿ ಆಚಾರ್ಯ ಗುಣಧರನಂದಿ ಮಹಾರಾಜರು ತಮ್ಮ
ಧಾರ್ಮಿಕ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳಾದ ಶ್ರೀ ಕುಮಾರಸ್ವಾಮಿಯವಾರು ಬರಲಿಲ್ಲವೆಂದು
ಮುನಿಸಿಕೊಂಡು ಅವರನ್ನೂ ಸೇರಿಸಿಕೊಂಡು ಕುಮಾರಸ್ವಾಮಿಯವರ ತಂದೆಯವರಾದ ಮಾಜಿ ಪ್ರಧಾನಿ ಶ್ರೀ
ದೇವೇಗೌಡರನ್ನು ’ವಂಚಕ’ (ಧೋಖೇಬಾಜ್) ಎಂದು ಸಾರ್ವಜನಿಕವಾಗಿ ಜರೆದರು. ನಂತರ ಸಮಾರಂಭಕ್ಕೆ
ಹೋಗಬೇಕಿದ್ದ ಉಪಮುಖ್ಯಮಂತ್ರಿಗಳಾದ ಶ್ರೀ ಯಡಿಯೋರಪ್ಪನವರು ಕೂಡ ಸಮಾರಂಭ ಬಹಿಷ್ಕರಿಸಿ
ಉಳಿಯಬೇಕಾಯಿತು. ವಿಚಲಿತರಾದ ಆಚಾರ್ಯರು ತಮ್ಮ್ ವರ್ತನೆಯಿಂದ ನೋವಾಗಿದ್ದರೆ ಕ್ಷಮಿಸಬೇಕೆಂದು
ಕೇಳಿಕೊಳ್ಳಬೇಕಾಯಿತು. ಈ ಸಂಧರ್ಬದಲ್ಲಿ ಬರೆದ ಅನಿಸಿಕೆ. ತಮ್ಮ ಜಾರಿದ ಮಾತಿನಿಂದಾಗಿ ’ತಾವೇ’
(ನಿಂತ ನೆಲವೇ) ಜಾರಿದುದನ್ನು ಸೆರೆಹಿಡಿಯಲಾಗಿದೆ.
ಆಚಾರ್ಯ ಗುಣಧರ ನಂದಿ
ಮಹಾರಾಜರು
ಅಚಾರ್ಯರಾದರೇನು?
ಸರ್ವಸಂಗ ಪರಿತ್ಯಾಗಿಗಳೇ?
ಅರಿಷಡ್ವರ್ಗಗಳನ್ನು ತೊಡೆದರೇ?
ವಿರಾಗಿ ಗುಣಧರರಾಗಿ
ಜಾರಿದ ಜಿಹ್ವೆಯ
ಅವಗುಣದಿ
’ತಾವೇ’ ಜಾರಿ
ತಮ್ಮ ನಾಲಿಗೆಯ
ತಾವೇ ಕಚ್ಚಿದರಲ್ಲಾ!
ಡಾ. ಎಸ್.ಎನ್. ಶ್ರೀಧರ
No comments:
Post a Comment