ದಕ್ಷ ಕೆಲಸಗಾರ
ಕೈಲಾಗದ ಸಹೋದ್ಯೋಗಿ
ಬಾಸಿಗೆ ಚಾಡಿ ಚುಚ್ಚಿ,
ದಕ್ಷ ಕೆಲಸಗಾರನ
ಕೆಲಸವ ಹೀಗಳೆದು,
ತನ್ನ ಮೇಲ್ಮೈ ತೋರುವ,
ದಕ್ಷ ಕೆಲಸಗಾರನು, ತಾನು ಮಾಡಿದ
ಕೆಲಸವನ್ನಾಸ್ವಾದಿಸುತ್ತಾ
ಇನ್ನೂ ಚಂದದ ಕೆಲಸದ
ಕನಸು ಕಾಣುತ್ತಾ,
ಸುತ್ತ ಮುತ್ತಲಿನ
ಭೂತಪ್ರೇತಗಳನ್ನೇ ಮರೆವ.
ಡಾ. ಎಸ್.ಎನ್. ಶ್ರೀಧರ
No comments:
Post a Comment