Tuesday, November 7, 2017

ಋತುಮಾನ

ಋತು(ಮಾನ)

ನಾವು ಬಿರುಬೇಸಿಗೆಯಲ್ಲೂ
ಮೇಕಪ್ ಮಾಡುವುದ
ಬಿಡಲಿಲ್ಲ, ಏಕೆಂದರೆ,
’ನಿಜರೂಪ’ವ ಮರೆಮಾಚಬೇಕಲ್ಲ!

ಜಡಿಮಳೆಯಲ್ಲೂ ನಾವು
ಕೊಡೆಗಳ ಬಿಚ್ಚುವುದು ಬೇಕಿಲ್ಲ
ಆದರೂ ನೆನೆಯುವುದಿಲ್ಲ,
ಏಕೆಂದರೆ, ನಾವೇ ’ಛತ್ರಿ’ಗಳು ಹೌದಲ್ಲ.

ಚಳಿಗಾಲದಲ್ಲೂ ಮೈ ತೋರುವ
ಉಡುಪನ್ನೇ ತೊಡುವೆವು,
ಆದರೂ ನಡುಗುವುದಿಲ್ಲ,
ಏಕೆಂದರೆ, ನಮಗೆ ಮಾನವೆಂಬುದಿಲ್ಲ.

No comments:

Post a Comment